ನನ್ನ ಓದುವ ಹುಚ್ಚು

ನಾನೂ high school ಹೋಗಿದ್ದೆ, ಎಲ್ಲರಂತೆ. ಅದೊಂದು ಹಳ್ಳಿ ಬಾಳಿಲ ಎಂದು. ಸಾಮಾನ್ಯ ಜನಾವಾಸದಿಂದ ಸ್ವಲ್ಪ ದೂರ. ಅಲ್ಲಿಂದಲ್ಲೇ ನನ್ನ ಈಗಿನ ಎಲ್ಲಾ ಹುಚ್ಚನ್ನು ಬೆಳೆಸಿಕೊಂಡಿದ್ದು. ಕೈಗೆ ಸಿಕ್ಕ ಪುಟವನ್ನು ಓದುವುದು, ಏನಾದರೂ ಗೀಚುತ್ತಾ ಇರುವುದು etc.etc. ಎಲ್ಲ ಶಿಕ್ಷಕರೂ creativity ( ಸೃಜನ ಶೀಲಾತೆಗೆ ) ಗೆ ತುಂಬಾ ಒತ್ತು ಕೊಡುತಿದ್ದರು.

ನಾನೂ ನನ್ನ ಚೆಡ್ದಿ ದೋಸ್ತು ಮಂಜು ಮತ್ತು ಕೆಲವರು ವಿಪರೀತ ಪ್ರಸಂಗೀಗಳು ( ಇದು ಅಧಿಕ ಪ್ರಸಂಗೀ ಗಿಂತಲೂ ಮೇಲೂ ). ಒಬ್ಬರ ಮೇಲೊಬ್ಬರು ಹಟ ಹಿಡಿದು ಓದುತ್ತಿದೆವು.

Bandaya
Bandaya

ಪಾಟ ಅಲ್ಲ , ಆದೇ ಕೈಗೆ ಸಿಕ್ಕಿದ ಪುಸ್ತಕಗಳು. ಶಲ್ಲ ಗ್ರಂಥಾಲಯದ ಎಲ್ಲ ಒಳ್ಳೇ ಪುಸ್ತಕಗಳು ಮೂರು ವರ್ಷಗಲ್ಲಿ ಓದಿ ಮುಗಿಸಿ ಬಿಟ್ಟಿದ್ದೆವು. ಅದರ ಮೇಲೆ ಶಾಸ್ತ್ರಿಗಳ ಮನೆಗೆ ಹೋಗಿ ಪುಸ್ತಕ ತರುತಿದ್ದೆವು. ಆಗ ಓದಿದ್ದೆ ಕೊನೇ . ಅದರ ನಂತರ ಕನ್ನಡ ಪುಸ್ತಕ ಓದುವ ಅವಕಾಶ್ ಸಿಗಲಿಲ್ಲ. ಅವುಗಳಲ್ಲಿ ಕೆಲವೊಂದು ಇನ್ನೂ ಮನಸಿನಲ್ಲಿ ಉಳಿದಿವೆ ..

ಕೆಲವು ಬರೆದಿದ್ದೇನೆ. ಉಳಿದದ್ದು ನೆನಪಾಗುತಿಲ್ಲ.

ವ್ಯಾಸರಾಯ ಬಲ್ಲಾಳ – ( ಬಂಡಾಯ )
ಎಸ್ ಎಲ್ ಭೈರಪ್ಪ ( ಭಿತ್ತಿ , ಪರ್ವ, ದಾಟು )
ಶಿವರಾಮ ಕಾರಂತ ( ಮರಳಿ ಮಣ್ಣಿಗೆ , ಮೂಕಜ್ಜಿಯ ಕನಸುಗಳು, ಚೋಮನ ದುಡಿ )
ಕುವೆಂಪು ( ಮಲೆಗಳಲ್ಲಿ ಮದುಮಗಳು , ಕಾನುರ ಹೆಗ್ಗಡತಿ )
ಯಶವಂತ ಚಿತ್ತಾಲ ( ಶಿಕಾರಿ , ಪುರುಷೋತ್ತಮ )
ಕೆ ಪಿ ಪೂರ್ಣಚಂದ್ರ ತೇಜಸ್ವಿ ( ಕರ್ವಾಲೋ , ಪರಿಸರದ ಕಥೆ )
ಬಿ ಜಿ ಎಲ್ ಸ್ವಾಮಿ ( ಹಸಿರು ಹೊನ್ನು )
ಯು ಆರ್ ಅನಂತಮೂರ್ತಿ ( ಸಂಸ್ಕ್ರಾರ )
ಗೊರೂರು ರಾಮಸ್ವಾಮಿ ಅಯ್ಯಂಗಾರ್ ( ನಮ್ಮ ಉರಿನ ರಸಿಕರು )
ವೋಲ್ಗಾ ಗಂಗಾ ( ರಾಹುಲ ಸಂಕೃತ್ಯಾಯನ ) – ಅನುವಾದಿತ

15 thoughts on “ನನ್ನ ಓದುವ ಹುಚ್ಚು

  1. ಇಲ್ಲಪ್ಪಾ… ಸಿಡ್ನಿ ಶೆಲ್ಡನ್ ದು ಒಂದೇ ಪುಸ್ತಕ ಓದಿರೋದು.
    Ayan Rand .. Fountain Head &Atlas Shrugged ಹತ್ತು ಸಲ ಶುರು ಮಾಡಿ ಇಟ್ಟಿದ್ದೀನಿ 🙂 ನೀವು ಓದಿ ಮುಗಿಸಿದ್ದೀರಿ ಅಂದರೆ ಗ್ರೇತ್ 🙂 ಸಹನೆ ನಿಮಗೆ ಜಾಸ್ತಿ 🙂
    ಇಂಗ್ಲಿಷ್‌ನಲ್ಲಿ ನಾನು ಓದಿರೋದು ಜಾನ್ ಗ್ರಿಶಮ್, ಎರಿಕ್ ಸೀಗಲ್, ಜೆಫ್ಫರಿ ಆರ್ಚರ್, ಅರ್ಥರ್ ಹೇಳಿ ಮುಂತಾದವರು.. Light Reading:)
    “ಲಜ್ಜಾ”.. ಓದಿ ಮುಗಿಸಿದ ಮೇಲೆ ಹೇಳಿ ಹೇಗಿದೆ ಅಂತ ನನ್ನ ಬಳಿ ಪುಸ್ತಕ ಇದೆ ಆದರೆ ಇನ್ನೂ ಓದಿಲ್ಲ
    ಈಗ ಜಿಡ್ಡು ಕೃಷ್ಣಮೂರ್ತಿಯವರ “ಅನುದಿಣ ಚಿಂತನ” ಓದುತ್ತಿದ್ದೀನಿ
    ಓ.. ಬೆಂಗಳೂರಿಗೆ ಬಂದಾಗ? ಹಾಗಾದರೆ ನೀವು ಎಲ್ಲಿ ಇರುವುದು?
    ಹಾಗೆ… ನಿಮಗೆ ಹಾಗೂ ನಿಮ್ಮ ಪರಿವಾರದವರಿಗೆ ನವ ವರ್ಷದ ಹಾರ್ದಿಕ ಶುಭಾಶಯಗಳು

    Like

  2. ರಮ್ಯಾಜಿ
    ಹ ಹ.. ;-)) ಇನ್ನೂ ಅದನ್ನೇ ಒದ್ಬೇಕೂಂತ ಹಟ ಇದ್ರೆ ಮರೆತು ಬಿಡಿ. ನಾನು ಓದಿ ಅನುಭವಿಸಿದ್ದೀನಿ., ನಿಮ್ಗೆ ಬೇಡ..
    ಯಾಕೋ ನೀವು ಹೇಳಿದ author ಗಳು ಯಾರೂ ನಂಗೆ ಇಷ್ಟವಿಲ್ಲ. Suspence , thrillar , detective .. ಯಾಕೋ ರುಚಿನೇ ಸಿಕ್ತ ಇಲ್ಲ. ಒಂದು ಕಾಲದಲ್ಲಿ ದ ಅಮ್ಮ ಅಯ್ಯ ಅಂತ ಓಡುತಿದ್ದೆ.
    “ಲಜ್ಜಾ” ಇಷ್ಟವಾಗೋದು.. ಇದು ನಿಮ್ಮ ಅಭಿರುಚಿ ಮೇಲೆ ಹೋಗುತ್ತೆ. ನಂಗಂತೂ ತುಂಬನೆ ಇಷ್ಟ ಆಯ್ತು.

    ನಾನು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲ ಮಂಗಳೂರಿನಲ್ಲಿ. ಗೊತ್ತಲ್ಲ ” ಎಂಥದು ಮಾರಾಯ” or ” ಎಂಚಿನ ಸಾವು ಮಾರಾಯ..” ( the latter was “tulu” .. if you are not familiar with ). ಈಗ ಇರೋದು ಚೆನ್ನೈ ನಲ್ಲಿ.

    Like

  3. ಓಹೋ, ಒಳ್ಳೆ ಮಾತುಕಥೆ. ಶಿಡ್ನಿ ಶೆಲ್ಡನ್ ಕಥೆ ಆಯ್ತು ಈಗ. ಅದೆಲ್ಲ ಸರಿ, ಒಂದು ವಿಚಾರ ನನ್ನ ತಲೇಲಿ ಬರ್ತಾ ಇದೆ. ನಮ್ಮ ಜನರೇಷನ್ ನವರು, ಓದೋ ಹಂಬಲ ಇನ್ನು ಇಟ್ಕೊಂಡಿದಾರೆ. ಬರೇಯೋದು ಕೊಡ. ಅದಕ್ಕೆ ಅಷ್ಟೊಂದು ಕನ್ನಡ ಬ್ಲಾಗು.
    ಪುಸ್ತಕ ಅಂಗಡಿನಲ್ಲಿ ನೋಡಬೇಕು, ಸುಮಾರು ಟೆಕ್ಕೀಸ್ ಇರ್ತಾರೆ, ಬೈರಪ್ಪ, ಮೂರ್ತಿ ರಾಯರ ಪುಸ್ತಕ ಹುಡುಕೊರು…!!
    ನೀವೇನು, ಸದಾ ಒಂದಲ್ಲ ಒಂದು ಪುಸ್ತಕ ಓದೋವ್ರೊ ? ತುಂಬಾ ಒಳ್ಳೆ ಅಭ್ಯಾಸ. ನನಗೆ ಇದರ ಬಗ್ಗೆ ಟಿಪ್ಸ್ ಕೊಡಿ. ಈಗ ಒಂದು ಪುಸ್ತಕ ಕೈಗೆತ್ತಿಕೊಂಡ್ರೆ ಒಂದು ತಿಂಗಳಾದ್ರು ಆಗ್ಬಹುದು ಇಲ್ಲ ಅನ್ದ್ರೆ ಮೂರು ಆದ್ರು ಆಶ್ಚರ್ಯ ಇಲ್ಲ….!

    Like

  4. veenaji,
    ನನಗೆ ಹಾಗೇನೂ ಅನ್ನಿಸ್ತಾ ಇಲ್ಲ. ಕನ್ನಡ ಬ್ಲಾಗಿಗರ ಸಂಖ್ಯೆ ತುಂಬಾ ಕಡಿಮೆ…. ಕನ್ನಡ ಬರೆಯಲು ಗೊತ್ತಿದ್ದರೂ english ಬ್ಲೋಗ್ ಬರೆದರೆ ಹೆಕ್ಚು ಓದುಗರು ಬರುತ್ತಾರೆ ಅಂತ. ಪುಸ್ತಕ ಓದುಗರ ಸಂಖ್ಯೇನೂ ಅಷ್ಟೊಂದು ಆಷಾದಯಾಕವಲ್ಲ ಅಂತ ನನಗೆ ಅನ್ನಿಸುತ್ತೆ.

    ನಾನು ಒಂದಲ್ಲ ಒಂದು ಪುಸ್ತಕ ಓದುವ ಹುಕ್ಚು. ಆದರೆ ಈಗೀಗ fiction ಅಂದ್ರೆ ಏನೋ ಒಂದು ತರಹ ಅಲರ್ಜಿ. ಬೇರೆ genere ಪುಸ್ತಕಗಳು ತುಂಬಾ ಕೋಸ್ಟ್ಲ್ಯ್. ಸಧ್ಯಕ್ಕಂತೂ pfd ಪುಸ್ತಕಗಳಿಂದ ದಿನ ಕಳೆಯುತ್ತಿದ್ದೇನೆ.

    Like

Leave a comment